WhatsApp Join My WhatsApp

India Post GDS Recruitment 2026: 28,740 ಹುದ್ದೆಗಳು | ಪರೀಕ್ಷೆ ಇಲ್ಲ | 10ನೇ ತರಗತಿ ಆಧಾರ

ಭಾರತೀಯ ಅಂಚೆ ಇಲಾಖೆ (ಸಂವಹನ ಸಚಿವಾಲಯ) 2026ನೇ ಸಾಲಿನ ಮೊದಲ ಹಂತದ ಭಾರೀ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ ದೇಶಾದ್ಯಂತ ಒಟ್ಟು 28,740 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನಮ್ಮ ಕರ್ನಾಟಕದಲ್ಲಿಯೇ 1,023 ಸ್ಥಾನಗಳು ಲಭ್ಯವಿವೆ

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ಕೇವಲ 10ನೇ ತರಗತಿಯ ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುವುದು. ಸರ್ಕಾರಿ ಉದ್ಯೋಗದ ಕನಸಿನಲ್ಲಿರುವ ಯುವಜನತೆಗೆ ಇದು ಒಂದು ಅದ್ಭುತ ಅವಕಾಶವಾಗಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಅಂಚೆ, ಬ್ಯಾಂಕಿಂಗ್ ಹಾಗೂ ಸರ್ಕಾರಿ ಸೇವೆಗಳನ್ನು ತಲುಪಿಸುವ ಜವಾಬ್ದಾರಿಯುತ ಕೆಲಸವಾಗಿದ್ದು, ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತೆ ಈ ಹುದ್ದೆಗಳಿಗೆ ಲಭ್ಯವಿದೆ.

🏢 ನೇಮಕಾತಿ ವಿವರ

  • ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ

  • ಹುದ್ದೆಗಳ ಹೆಸರು:

    • ಶಾಖಾ ಅಂಚೆ ಅಧಿಕಾರಿ (BPM)

    • ಸಹಾಯಕ ಶಾಖಾ ಅಂಚೆ ಅಧಿಕಾರಿ (ABPM)

    • ಅಂಚೆ ಸೇವಕ (Dak Sevak)

  • ಒಟ್ಟು ಹುದ್ದೆಗಳು: 28,740

  • ಕರ್ನಾಟಕ ವೃತ್ತ: 1,023 ಹುದ್ದೆಗಳು

  • ಉದ್ಯೋಗ ಸ್ಥಳ: ಭಾರತದಾದ್ಯಂತ ಗ್ರಾಮೀಣ ಅಂಚೆ ಕಚೇರಿಗಳು

  • ಅರ್ಜಿ ವಿಧಾನ: ಆನ್‌ಲೈನ್ ಮಾತ್ರ

📌 ಹುದ್ದೆಗಳ ಕೆಲಸದ ವಿವರ

🔹 ಶಾಖಾ ಅಂಚೆ ಅಧಿಕಾರಿ (BPM)

ಗ್ರಾಮ ಮಟ್ಟದ ಅಂಚೆ ಕಚೇರಿಯ ಮುಖ್ಯಸ್ಥರಾಗಿದ್ದು, ಅಂಚೆ ಉಳಿತಾಯ ಯೋಜನೆಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆಗಳು ಮತ್ತು ಕಚೇರಿ ನಿರ್ವಹಣೆ ಇವರ ಜವಾಬ್ದಾರಿ.

🔹 ಸಹಾಯಕ ಶಾಖಾ ಅಂಚೆ ಅಧಿಕಾರಿ (ABPM)

BPM ಅವರಿಗೆ ಸಹಾಯ ಮಾಡುವುದರ ಜೊತೆಗೆ, ಅಂಚೆ ಚೀಟಿಗಳ ಮಾರಾಟ, ಪತ್ರ ವಿತರಣೆ ಮತ್ತು ಗ್ರಾಹಕ ಸೇವಾ ಕೇಂದ್ರಗಳ ನಿರ್ವಹಣೆ.

🔹 ಅಂಚೆ ಸೇವಕ (Dak Sevak)

ಅಂಚೆ ಚೀಲಗಳ ವಿಂಗಡಣೆ, ಹಸ್ತಾಂತರ ಮತ್ತು ಕಚೇರಿಯ ದೈನಂದಿನ ಕೆಲಸಗಳನ್ನು ನಿರ್ವಹಿಸುತ್ತಾರೆ.

🎓 ವಿದ್ಯಾರ್ಹತೆ

  • ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು

  • 10ನೇ ತರಗತಿಯಲ್ಲಿ ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು

  • ಆಯಾ ವೃತ್ತದ ಸ್ಥಳೀಯ ಭಾಷೆ (ಕರ್ನಾಟಕಕ್ಕೆ ಕನ್ನಡ) 10ನೇ ತರಗತಿಯವರೆಗೆ ಓದಿರಬೇಕು

  • ಮೂಲಭೂತ ಕಂಪ್ಯೂಟರ್ ಜ್ಞಾನ ಅಗತ್ಯ

  • ಸೈಕಲ್ ಸವಾರಿ ತಿಳಿದಿರಬೇಕು (ದ್ವಿಚಕ್ರ ವಾಹನಕ್ಕೂ ಮಾನ್ಯತೆ)

  • ಅಂಚೆ ಇಲಾಖೆಯ ಆದಾಯವಲ್ಲದೆ ಬೇರೆ ಆದಾಯದ ಮೂಲ ಇರಬೇಕು.

ಪ್ರಮುಖ ದಿನಾಂಕಗಳು

ವಿವರ ದಿನಾಂಕ
ಆನ್‌ಲೈನ್ ನೋಂದಣಿ ಆರಂಭದ ದಿನಾಂಕ    31.01.2026
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ    16.02.2026
ಅರ್ಜಿ ತಿದ್ದುಪಡಿಗಾಗಿ ವಿಂಡೋ ತೆರೆಯುವ ದಿನಾಂಕ    18.02.2026 ರಿಂದ 19.02.2026
ಮೆರಿಟ್ ಪಟ್ಟಿ ಪ್ರಕಟವಾಗುವ ಅಂದಾಜು ಸಮಯ    ಮಾರ್ಚ್ 2026

 

🎓ವಯೋಮಿತಿ (16-02-2026ಕ್ಕೆ ಅನ್ವಯಿಸಿ)

  • ಕನಿಷ್ಠ: 18 ವರ್ಷ

  • ಗರಿಷ್ಠ: 40 ವರ್ಷ

ವಯೋಮಿತಿ ಸಡಿಲಿಕೆ

  • SC/ST: 5 ವರ್ಷ

  • OBC: 3 ವರ್ಷ

  • PwBD: 10 ವರ್ಷ

  • PwBD + OBC: 13 ವರ್ಷ

  • PwBD + SC/ST: 15 ವರ್ಷ

  • EWS: ಸಡಿಲಿಕೆ ಇಲ್ಲ

💰 ವೇತನಶ್ರೇಣಿ

  • BPM: ₹12,000 – ₹29,380

  • ABPM / Dak Sevak: ₹10,000 – ₹24,470

  • ಜೊತೆಗೆ DA ಮತ್ತು ವಾರ್ಷಿಕ 3% ವೇತನ ಏರಿಕೆ

ಅರ್ಜಿ ಶುಲ್ಕ

  • UR / OBC / EWS (ಪುರುಷ): ₹100

  • ಮಹಿಳೆಯರು, SC/ST, PwBD, ತೃತೀಯ ಲಿಂಗಿ: ಉಚಿತ

📝 ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ಅಂಚೆ ಜಾಲತಾಣಕ್ಕೆ ಭೇಟಿ ನೀಡಿ Registration ಮಾಡಿ

  2. ಮೊಬೈಲ್ ಮತ್ತು ಇಮೇಲ್ ಮೂಲಕ OTR ಪೂರ್ಣಗೊಳಿಸಿ

  3. ಲಾಗಿನ್ ಮಾಡಿ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ ಭರ್ತಿ ಮಾಡಿ

  4. ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ

  5. ಹುದ್ದೆ ಮತ್ತು ವಿಭಾಗದ ಆದ್ಯತೆ ಆಯ್ಕೆ ಮಾಡಿ

  6. ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ

  7. ಅರ್ಜಿಯ ಪ್ರಿಂಟ್ ಕಾಪಿ ಉಳಿಸಿಕೊಳ್ಳಿ

ಆಯ್ಕೆ ವಿಧಾನ

  • ಮೆರಿಟ್ ಪಟ್ಟಿ: 10ನೇ ತರಗತಿಯ ಅಂಕಗಳ ಆಧಾರದಲ್ಲಿ

  • ಗ್ರೇಡ್ ಇದ್ದರೆ: 9.5 ಗುಣಕದಿಂದ ಅಂಕ ಪರಿವರ್ತನೆ

  • ಸಮಾನ ಅಂಕ: ವಯಸ್ಸಿನಲ್ಲಿ ಹಿರಿಯರಿಗೆ ಆದ್ಯತೆ

  • ದಾಖಲೆ ಪರಿಶೀಲನೆ: 15 ದಿನಗಳೊಳಗೆ

  • ಅಂತಿಮ ನೇಮಕಾತಿ ಆದೇಶ: ದಾಖಲೆ ಪರಿಶೀಲನೆಯ ನಂತರ

 

 Official Website : Click here

 Apply Now :  Click here

Leave a Comment