Indian Army Agniveer Recruitment 2026: 25,000+ Posts Announced | Apply Online from Feb 13
ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ 2026 ಕುರಿತ ಬಹು ನಿರೀಕ್ಷಿತ ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ದೇಶ ಸೇವೆ ಮಾಡುವ ಕನಸು ಕಾಣುತ್ತಿರುವ ಯುವಕರಿಗೆ ಇದು ಸುವರ್ಣಾವಕಾಶವಾಗಿದೆ. ಫೆಬ್ರವರಿ 12, 2026 ರಂದು ಅಧಿಸೂಚನೆ ಪ್ರಕಟಗೊಂಡಿದ್ದು, ಆನ್ಲೈನ್ ನೋಂದಣಿ ಪ್ರಕ್ರಿಯೆ ಫೆಬ್ರವರಿ 13, 2026 ರಿಂದ ಪ್ರಾರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 1, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಹೊಂದಿದ್ದಾರೆ.
ಈ ಬಾರಿ ಅಗ್ನಿವೀರ್ ನೇಮಕಾತಿಯಡಿ 25,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆಯಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಮೂಲೆ ಮೂಲೆಯ ಯುವಕ-ಯುವತಿಯರಿಗೆ ಇದು ಸೌದರ್ಯದ ಬಾಗಿಲು ತೆರೆದಂತಿದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆಗಳು ಮತ್ತು ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೊನೆಯವರೆಗೂ ಓದಿ!
ಯಾವೆಲ್ಲಾ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ?
ಈ ಬಾರಿ ಭಾರತೀಯ ಸೇನೆಯು ಕೇವಲ ಪುರುಷರಿಗೆ ಮಾತ್ರವಲ್ಲದೆ, ಮಹಿಳಾ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡುತ್ತಿದೆ. ಈ ಕೆಳಗಿನ ವಿವಿಧ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ:
- ಅಗ್ನಿವೀರ್ ಜನರಲ್ ಡ್ಯೂಟಿ (GD): ಸೈನಿಕರ ಪ್ರಮುಖ ವಿಭಾಗ.
- ಅಗ್ನಿವೀರ್ ಮಹಿಳಾ ಮಿಲಿಟರಿ ಪೊಲೀಸ್: ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ.
- ಅಗ್ನಿವೀರ್ ಟೆಕ್ನಿಕಲ್: ತಾಂತ್ರಿಕ ಜ್ಞಾನವುಳ್ಳವರಿಗೆ ಮೀಸಲು.
- ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್: ಕಚೇರಿ ಕೆಲಸ ಮತ್ತು ದಾಸ್ತಾನು ನಿರ್ವಹಣೆ.
- ಅಗ್ನಿವೀರ್ ಟ್ರೇಡ್ಸ್ಮ್ಯಾನ್ (10th & 8th Pass): ವಿವಿಧ ವೃತ್ತಿಪರ ಕೆಲಸಗಳಿಗೆ.
- ಸಿಪಾಯಿ ಫಾರ್ಮಾ & ಸೋಲ್ಜರ್ ಟೆಕ್ನಿಕಲ್: ವೈದ್ಯಕೀಯ ಮತ್ತು ವಿಶೇಷ ತಾಂತ್ರಿಕ ವಿಭಾಗಗಳು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಸಮಯ ಬಹಳ ಕಡಿಮೆ ಇದೆ. ಆದ್ದರಿಂದ ಈ ಕೆಳಗಿನ ದಿನಾಂಕಗಳನ್ನು ನಿಮ್ಮ ಕ್ಯಾಲೆಂಡರ್ನಲ್ಲಿ ಗುರುತು ಮಾಡಿಕೊಳ್ಳಿ:
| ವಿವರ | ದಿನಾಂಕ |
| ಅರ್ಜಿ ಸಲ್ಲಿಕೆ ಆರಂಭ | ಫೆಬ್ರವರಿ 13, 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಏಪ್ರಿಲ್ 01, 2026 |
| ಆನ್ಲೈನ್ ಪರೀಕ್ಷೆ (ತಾತ್ಕಾಲಿಕ) | ಜೂನ್ 01 ರಿಂದ 15, 2026 |
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಅಗ್ನಿವೀರ್ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:
- ಜನರಲ್ ಡ್ಯೂಟಿ (GD): 10ನೇ ತರಗತಿಯಲ್ಲಿ ಕನಿಷ್ಠ 45% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಟೆಕ್ನಿಕಲ್ ಹುದ್ದೆ: 12ನೇ ತರಗತಿ (ಪಿಯುಸಿ) ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್) ಉತ್ತೀರ್ಣ.
- ಕ್ಲರ್ಕ್ / ಸ್ಟೋರ್ ಕೀಪರ್: ಯಾವುದೇ ವಿಭಾಗದಲ್ಲಿ (ಕಲಾ, ವಾಣಿಜ್ಯ, ವಿಜ್ಞಾನ) 12ನೇ ತರಗತಿ ಪಾಸಾಗಿರಬೇಕು (ಕನಿಷ್ಠ 50% ಅಂಕ).
- ಟ್ರೇಡ್ಸ್ಮ್ಯಾನ್: 8ನೇ ಅಥವಾ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.
- ವಯೋಮಿತಿ: ಕನಿಷ್ಠ 17.5 ವರ್ಷ ಹಾಗೂ ಗರಿಷ್ಠ 22 ವರ್ಷಗಳು. (ಸೇನಾ ನಿಯಮಗಳಂತೆ ಸಡಿಲಿಕೆ ಇರುತ್ತದೆ).
📝 ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಗ್ನಿವೀರ್ ನೇಮಕಾತಿ ಎರಡು ಮುಖ್ಯ ಹಂತಗಳಲ್ಲಿ ನಡೆಯುತ್ತದೆ:
🔹 ಹಂತ–1: ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE)
-
ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳು (MCQ)
-
ಸರಿಯಾದ ಉತ್ತರಗಳಿಗೆ ಪೂರ್ಣ ಅಂಕ
-
ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ (ಅಧಿಸೂಚನೆಯ ಪ್ರಕಾರ)
ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಆನ್ಲೈನ್ ಟೈಪಿಂಗ್ ಪರೀಕ್ಷೆ ಇರುತ್ತದೆ.
ಇಂಗ್ಲಿಷ್ನಲ್ಲಿ ಕನಿಷ್ಠ 30 ಪದಗಳು ಪ್ರತಿ ನಿಮಿಷ (WPM) ವೇಗ ಅಗತ್ಯ.
CEE ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧವಾಗುತ್ತದೆ.
🔹 ಹಂತ–II: ನೇಮಕಾತಿ ರ್ಯಾಲಿ
ಹಂತ-I ಯಲ್ಲಿ ಅರ್ಹರಾದವರಿಗೆ ರ್ಯಾಲಿ ಕರೆದಿಡಲಾಗುತ್ತದೆ. ಇದರಲ್ಲಿ:
1️⃣ ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
GD ಮತ್ತು ಟ್ರೇಡ್ಸ್ಮೆನ್ ಹುದ್ದೆಗಳು:
-
1.6 ಕಿ.ಮೀ ಓಟ – ಗರಿಷ್ಠ 60 ಅಂಕ
-
ಪುಲ್-ಅಪ್ಗಳು – ಗರಿಷ್ಠ 40 ಅಂಕ
-
9 ಅಡಿ ಡಿಚ್ ಜಂಪ್ (ಅರ್ಹತಾ ಪರೀಕ್ಷೆ)
-
ಝಿಗ್-ಝ್ಯಾಗ್ ಬ್ಯಾಲೆನ್ಸ್ (ಅರ್ಹತಾ ಪರೀಕ್ಷೆ)
ಟೆಕ್ನಿಕಲ್ ಮತ್ತು ಕ್ಲರ್ಕ್ ಹುದ್ದೆಗಳು:
-
ಎಲ್ಲಾ ದೈಹಿಕ ಪರೀಕ್ಷೆಗಳಲ್ಲಿ ಅರ್ಹತೆ ಮಾತ್ರ ಅಗತ್ಯ
-
PFT ಅಂಕಗಳು ಅಂತಿಮ ಮೆರಿಟ್ಗೆ ಸೇರಲಾಗುವುದಿಲ್ಲ
2️⃣ ಭೌತಿಕ ಮಾಪನ ಪರೀಕ್ಷೆ (PMT)
-
ಎತ್ತರ
-
ತೂಕ
-
ಎದೆಯ ಪ್ರಮಾಣ
ಪ್ರದೇಶ ಮತ್ತು ವರ್ಗದ ಮಾನದಂಡಗಳ ಪ್ರಕಾರ ಪರಿಶೀಲನೆ.
3️⃣ ವೈದ್ಯಕೀಯ ಪರೀಕ್ಷೆ
PFT ಮತ್ತು PMT ನಲ್ಲಿ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ.
ವೈದ್ಯಕೀಯವಾಗಿ ಅನರ್ಹರಾಗಿದರೆ 21 ದಿನಗಳೊಳಗೆ ಮಿಲಿಟರಿ ಆಸ್ಪತ್ರೆಯಲ್ಲಿ ಮರುಪರಿಶೀಲನೆ ಅವಕಾಶ ಇದೆ.
🏆 ಅಂತಿಮ ಮೆರಿಟ್ ಪಟ್ಟಿ
ಅಂತಿಮ ಆಯ್ಕೆ CEE ಅಂಕಗಳು ಮತ್ತು ಬೋನಸ್ ಅಂಕಗಳ ಆಧಾರದ ಮೇಲೆ:
-
ಟೆಕ್ನಿಕಲ್ ಅಭ್ಯರ್ಥಿಗಳು – ITI/ಡಿಪ್ಲೊಮಾ ಇದ್ದರೆ 50 ಬೋನಸ್ ಅಂಕ
-
ಇತರ ವರ್ಗಗಳು – NCC ‘C’ ಪ್ರಮಾಣಪತ್ರ, ಕ್ರೀಡೆ ಇತ್ಯಾದಿಗಳಿಗೆ ಗರಿಷ್ಠ 25 ಅಂಕ
ಆಕರ್ಷಕ ವೇತನ ಮತ್ತು ‘ಸೇವಾ ನಿಧಿ’ ಪ್ಯಾಕೇಜ್
ಅಗ್ನಿವೀರ್ ಆಗಿ ಆಯ್ಕೆಯಾದವರಿಗೆ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಸಿಗುವ ವೇತನ ಮತ್ತು ಸೌಲಭ್ಯಗಳು ಈ ಕೆಳಗಿನಂತಿವೆ:
- 1ನೇ ವರ್ಷ: ₹30,000 ಸಂಬಳ (ಕೈಗೆ ಸಿಗುವುದು ₹21,000 + ₹9,000 ಕಾರ್ಪಸ್ ನಿಧಿ).
- 2ನೇ ವರ್ಷ: ₹33,000 ಸಂಬಳ (ಕೈಗೆ ಸಿಗುವುದು ₹23,100 + ₹9,900 ಕಾರ್ಪಸ್ ನಿಧಿ).
- 3ನೇ ವರ್ಷ: ₹36,500 ಸಂಬಳ (ಕೈಗೆ ಸಿಗುವುದು ₹25,550 + ₹10,950 ಕಾರ್ಪಸ್ ನಿಧಿ).
- 4ನೇ ವರ್ಷ: ₹40,000 ಸಂಬಳ (ಕೈಗೆ ಸಿಗುವುದು ₹28,000 + ₹12,000 ಕಾರ್ಪಸ್ ನಿಧಿ).
ಬಂಪರ್ ಲಾಭ: 4 ವರ್ಷಗಳ ಯಶಸ್ವಿ ಸೇವೆಯ ನಂತರ, ಅಭ್ಯರ್ಥಿಗಳು ಬಡ್ಡಿಯೂ ಸೇರಿದಂತೆ ಒಟ್ಟು ₹10.04 ಲಕ್ಷಗಳ ‘ಸೇವಾ ನಿಧಿ’ ಪ್ಯಾಕೇಜ್ ಪಡೆಯುತ್ತಾರೆ. ಈ ಮೊತ್ತಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ! ಜೊತೆಗೆ ₹48 ಲಕ್ಷದ ಜೀವ ವಿಮಾ ಸೌಲಭ್ಯವೂ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
-
ಅಧಿಕೃತ ವೆಬ್ಸೈಟ್ joinindianarmy.nic.in ಗೆ ಭೇಟಿ ನೀಡಿ
-
“Agnipath” ವಿಭಾಗವನ್ನು ಕ್ಲಿಕ್ ಮಾಡಿ
-
ನೋಂದಣಿ (Registration): ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ ‘New User’ ಮೇಲೆ ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ.
-
ಲಾಗಿನ್: ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ಮಾಹಿತಿ ಭರ್ತಿ: ಅರ್ಜಿಯಲ್ಲಿ ಕೇಳಲಾದ ಹೆಸರು, ವಿಳಾಸ, ಶಿಕ್ಷಣದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ದಾಖಲೆ ಅಪ್ಲೋಡ್: ನಿಮ್ಮ ಭಾವಚಿತ್ರ (Photo), ಸಹಿ ಮತ್ತು ಅಗತ್ಯ ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಶುಲ್ಕ ಪಾವತಿ: ₹250 ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಸಲ್ಲಿಸಿ (Submit): ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ‘Submit’ ಬಟನ್ ಒತ್ತಿ ಮತ್ತು ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಗಮನಿಸಿ: ಈ ಯೋಜನೆಯಡಿ ಆಯ್ಕೆಯಾದವರಲ್ಲಿ 25% ಜನರನ್ನು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಸೇನೆಯಲ್ಲಿ ಕಾಯಂ ಆಗಿ ಉಳಿಸಿಕೊಳ್ಳುವ ಅವಕಾಶವೂ ಇರುತ್ತದೆ. ಇನ್ನೇಕೆ ತಡ? ಇಂದೇ ಸಿದ್ಧತೆ ಆರಂಭಿಸಿ, ಭಾರತ ಮಾತೆಯ ರಕ್ಷಣೆಗೆ ಸೊಂಟ ಕಟ್ಟಿ ನಿಲ್ಲಿ. ಈ ಮಾಹಿತಿಯನ್ನು ನಿಮ್ಮ ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಅಧಿಕೃತ ಅಧಿಸೂಚನೆ : Download Link
ಅಪ್ಲೈ ಲಿಂಕ್ : Apply Now
ಅಧಿಕೃತ ವೆಬ್ಸೈಟ್ : joinindianarmy.nic.in
ಜಾಬ್ ಅಪ್ಡೇಟ್ ಗಳಿಗಾಗಿ : allinonekannadiga.com