WhatsApp Join My WhatsApp

ಮೊಬೈಲ್‌ನಲ್ಲೇ ಬೆಳೆ ವಿಮೆ ಹಣ ಸ್ಟೇಟಸ್ ಚೆಕ್ ಮಾಡಿ!

ಬೆಳೆ ವಿಮೆ ಮಾಡಿಸಿದ ರೈತರು ತಮ್ಮಿಗೆ ಎಷ್ಟು ವಿಮೆ ಹಣ ಜಮೆಯಾಗಿದೆ ಅಥವಾ ಮುಂದಿನ ದಿನಗಳಲ್ಲಿ ಜಮೆಯಾಗುತ್ತದೆ ಎಂಬುದನ್ನು ಈಗ ಸುಲಭವಾಗಿ ಮೊಬೈಲ್‌ನಲ್ಲೇ ಚೆಕ್ ಮಾಡಬಹುದು. ಇದಕ್ಕಾಗಿ ಕಚೇರಿ ಸುತ್ತುವ ಅವಶ್ಯಕತೆ ಇಲ್ಲ.

ಪ್ರಸಕ್ತ ಸಾಲಿನ ಮುಂಗಾರು ಹಾಗೂ ಹಿಂಗಾರು (Rabi) ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಅರ್ಜಿಯ ಸ್ಥಿತಿ (Application Status) ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ, ಪ್ರಕ್ರಿಯೆ ಪೂರ್ಣಗೊಂಡಿದೆಯೇ ಹಾಗೂ ವಿಮೆ ಹಣ ಜಮೆಯಾದ ವಿವರಗಳೂ ಲಭ್ಯವಾಗುತ್ತವೆ.

🌾 ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಅಧಿಕೃತ ವೆಬ್‌ಸೈಟ್

ರೈತರು ಕೆಳಗಿನ ಅಧಿಕೃತ ಲಿಂಕ್ ಮೂಲಕ ಬೆಳೆ ವಿಮೆ ಸ್ಟೇಟಸ್ ಪರಿಶೀಲಿಸಬಹುದು 👇

👉 https://www.samrakshane.karnataka.gov.in/

📲 ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ವಿಧಾನ (Step by Step)

🔹 Step 1:  ಲಿಂಕ್ ಮೇಲೆ ಕ್ಲಿಕ್ ಮಾಡಿ.

        Link : https://www.samrakshane.karnataka.gov.in/

🔹 Step 2: ತೆರೆಯುವ ಪುಟದಲ್ಲಿ

  • ವರ್ಷ: 2025–26 ಆಯ್ಕೆ ಮಾಡಿ

  • ಹಂಗಾಮು: Rabi (ಹಿಂಗಾರು) ಆಯ್ಕೆ ಮಾಡಿ
    ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಿ.

  • ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ವರ್ಷದ ಆಯ್ಕೆ / Select Insurance Year : “2025-26” ಎಂದು ವರ್ಷವನ್ನು ಆಯ್ಕೆ ಮಾಡಿ ಬಳಿಕ ಋತು “Rabi /ಹಿಂಗಾರು” ಎಂದು ಆಯ್ಕೆ ಮಾಡಿ ಕೆಳಗೆ ಕಾಣುವ “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

 

🔹Step 3: ನಿಮ್ಮProposal ID ಅಥವಾ

  • Mobile Number ನಮೂದಿಸಿ
    ನಂತರ Check ಮೇಲೆ ಕ್ಲಿಕ್ ಮಾಡಿ.

ನಂತರ ಈ ಪೇಜ್ ನಲ್ಲಿ ಕೆಳಗೆ “Farmers” ಕಾಲಂ ನಲ್ಲಿ ಮೂರನೆಯ ಆಯ್ಕೆ ಅಂದರೆ “Check Status” ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ “Mobile No” ಸೆಲೆಕ್ಟ್ ಮಾಡಿಕೊಂಡು ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಖ್ಯೆ , ವಿಮಾ ಕಂಪನಿಯ ಹೆಸರು, ಅರ್ಜಿದಾರರ ಹೆಸರು ಮತ್ತು ನಿಮ್ಮ ಅರ್ಜಿಯ ಸ್ಥಿತಿ ತೋರಿಸುತ್ತದೆ. ಈ ಮಾಹಿತಿ ತೋರಿಸದೇ NO DATA FOUND ಎಂದು ಗೋಚರಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಅರ್ಥ.

🔹Step-4: ಬೆಳೆ ವಿಮೆ ಹಣ ಜಮಾ ವಿವರವನ್ನು ತಿಳಿಯಲು ಹೀಗೆ ಮಾಡಿ ಇದೇ ಪೇಜ್ ನಲ್ಲಿ ಕೊನೆಯಲ್ಲಿ ಕಾಣುವ “Select” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ ಕೊನೆಯಲ್ಲಿ UTR Details ಕಾಲಂ ಕೆಳಗೆ ನಿಮಗೆ ಬೆಳೆ ವಿಮೆ ಹಣ ಜಮಾ ಅಗಿದ್ದರೆ ಯಾವ ದಿನಾಂಕದಂದು ಜಮಾ ಅಗಿದೆ? ಎಷ್ಟು ಮೊತ್ತ? ಬ್ಯಾಂಕ್ ಖಾತೆಯ ಕೊನೆಯ 4 ಸಂಖ್ಯೆಯ ವಿವರ ಮತ್ತು ಹೆಸರು ತೋರಿಸುತ್ತದೆ.

Bele Vime Mahiti-ಬೆಳೆ ವಿಮೆ ಅರ್ಜಿ ಕುರಿತು ತಪ್ಪದೇ ಈ ಮಾಹಿತಿ ತಿಳಿಯಿರಿ:

ರೈತರು ಬೆಳೆ ವಿಮೆಯನ್ನು ಪಡೆಯಲು ತಪ್ಪದೇ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡಿರಬೇಕು.

ಬೆಳೆ ವಿಮೆ ಅರ್ಜಿಯಲ್ಲಿ ನಮೂದಿಸಿದ ಬೆಳೆ ವಿವರ ಮತ್ತು ಬೆಳೆ ಸಮೀಕ್ಷೆಯ ಬೆಳೆ ವಿವರ ತಾಳೆಯಾದರೆ ಮಾತ್ರ ಬೆಳೆ ವಿಮಾ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ಪರಿಹಾರದ ಹಣ ಪಡೆಯಲು ಸಾಧ್ಯವಾಗುವುದಿಲ್ಲ

Crop Survey Details-ಬೆಳೆ ವಿಮೆ ಅರ್ಜಿ ಬೆಳೆ ವಿವರ ಮತ್ತು ಬೆಳೆ ಸಮೀಕ್ಷೆ ಬೆಳೆ ಮಾಹಿತಿ ಎಂದರೇನು?

ರೈತರು ಮುಂಗಾರು ಹಂಗಾಮಿನಲ್ಲಿ ತಾವು ಜಮೀನಿನಲ್ಲಿ ಬೆಳೆದಿರುವ ಬೆಳೆಯ ಹೆಸರಿನ ಬೆಳೆ ವಿಮೆಯನ್ನು ಮಾಡಿಸಿದಾಗ ನಂತರ ಕೃಷಿ ಇಲಾಖೆಯಿಂದ ಮೊಬೈಲ್ ಅಪ್ಲಿಕೇಶನ್ ಮೂಲಕ ಖಾಸಗಿ ವ್ಯಕ್ತಿಗಳ ಮೂಲಕ ನಡೆಸುವ ಬೆಳೆ ಸಮೀಕ್ಷೆಯಲ್ಲಿಯು ಸಹ ಎರಡರಲ್ಲಿಯು ಒಂದೆ ಬೆಳೆ ವಿವರ ದಾಖಲಾಗಿರಬೇಕು ಹೀಗಿದರೆ ಮಾತ್ರ ವಿಮಾ ಪರಿಹಾರವನ್ನು ಪಡೆಯಬಹುದು.

Leave a Comment