Karnataka Budget 2026: ರಾಜ್ಯದ ಜನರಿಗೆ ಏನು ಸಿಕ್ಕಿತು?
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ವಿಶೇಷ ಮಹತ್ವ ಹೊಂದಿದ್ದು, ಇದು ಸಿದ್ದರಾಮಯ್ಯ ಅವರು ಮಂಡಿಸಿರುವ 17ನೇ ಬಜೆಟ್ ಎಂಬ ಐತಿಹಾಸಿಕ ಸಾಧನೆಯಾಗಿದೆ. ಈ ವರ್ಷದ ಆಯವ್ಯಯದಲ್ಲಿ ಅಭಿವೃದ್ಧಿ ಯೋಜನೆಗಳು, ಗ್ಯಾರಂಟಿ ಯೋಜನೆಗಳು, ಶಿಕ್ಷಣ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಮಹತ್ವ ನೀಡಲಾಗಿದೆ.
ರಾಜ್ಯದ ವಿವಿಧ ವರ್ಗಗಳ ಜನರಿಗೆ ಅನುಕೂಲವಾಗುವಂತೆ ಹಲವು ಹೊಸ ಯೋಜನೆಗಳು ಮತ್ತು ಅನುದಾನಗಳನ್ನು ಸರ್ಕಾರ ಘೋಷಿಸಿದೆ.
ದೇವಸ್ಥಾನಗಳಿಗೆ ಸಿಹಿ ಸುದ್ದಿ
ಈ ಬಾರಿಯ ಬಜೆಟ್‌ನಲ್ಲಿ ಕೆಲವು ಪ್ರಮುಖ ದೇವಸ್ಥಾನಗಳಿಗೆ ಸರ್ಕಾರ ವಿಶೇಷ ಘೋಷಣೆಗಳನ್ನು ಮಾಡಿದೆ.
-
ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ.
-
ಮುಜರಾಯಿ ಇಲಾಖೆಯ ಅಧೀನದಲ್ಲಿರುವ 259 ಕಲ್ಯಾಣಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.
-
ಹೊರ ರಾಜ್ಯದಲ್ಲಿರುವ ಮುಜರಾಯಿ ಛತ್ರಗಳ ನವೀಕರಣಕ್ಕೂ ಸರ್ಕಾರ ಮುಂದಾಗಿದೆ. ಇದರಲ್ಲಿ
-
ವಾರಣಾಸಿ
-
ಮಂತ್ರಾಲಯ ಶ್ರೀ ರಾಘವೇಂದ್ರ ದೇವಸ್ಥಾನ
-
ಶ್ರೀಶೈಲಂ
-
ತುಳಜಾಪುರ
-
ಇವುಗಳ ಛತ್ರಗಳ ನವೀಕರಣಕ್ಕೆ ನಿರ್ಧಾರ ಮಾಡಲಾಗಿದೆ.
ಇದೇ ವೇಳೆ ಕಾಶ್ಮೀರದ ಮಾತಾ ವೈಷ್ಣೋದೇವಿ ಯಾತ್ರೆಗೆ ಹೋಗುವ ಯಾತ್ರಿಕರಿಗೆ ₹5,000 ಧನಸಹಾಯ ನೀಡಲಾಗುತ್ತದೆ. ಈ ಹಣವನ್ನು DBT (Direct Benefit Transfer) ಮೂಲಕ ನೀಡಲಾಗುತ್ತದೆ.
📌 ವಿವಿಧ ಇಲಾಖೆಗಳ ಆದಾಯ ಗುರಿ
2026-27ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೂ ಸರ್ಕಾರ ಆದಾಯ ಗುರಿ ನಿಗದಿ ಮಾಡಿದೆ.
-
ಸಾರಿಗೆ ಇಲಾಖೆ – ₹15,500 ಕೋಟಿ
-
ನೋಂದಣಿ ಮತ್ತು ಮುದ್ರಾಂಕ – ₹29,000 ಕೋಟಿ
-
ಅಬಕಾರಿ ಇಲಾಖೆ – ₹45,000 ಕೋಟಿ
-
ಗಣಿ ಇಲಾಖೆ – ₹11,000 ಕೋಟಿ
-
ವಾಣಿಜ್ಯ ಇಲಾಖೆ – ₹1,25,000 ಕೋಟಿ
ಈ ಗುರಿಗಳ ಮೂಲಕ ರಾಜ್ಯದ ಆದಾಯವನ್ನು ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ.
📌 ಕನ್ನಡ ಚಿತ್ರರಂಗಕ್ಕೆ ಸರ್ಕಾರದ ನೆರವು
ಈ ಬಜೆಟ್‌ನಲ್ಲಿ ಕನ್ನಡ ಚಿತ್ರರಂಗಕ್ಕೂ ಕೆಲವು ಘೋಷಣೆಗಳನ್ನು ಮಾಡಲಾಗಿದೆ.
-
ಫಿಲ್ಮ್ ಸಿಟಿಯಲ್ಲಿ ಥೀಮ್ ಪಾರ್ಕ್ ಮತ್ತು ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮೋದನೆ
-
ಚಿತ್ರರಂಗದ ಸಮಸ್ಯೆಗಳನ್ನು ಪರಿಹರಿಸಲು “ಸಿನಿಮಿತ್ರ” ಡಿಜಿಟಲ್ ವ್ಯವಸ್ಥೆ ಜಾರಿಗೆ ತರುವ ನಿರ್ಧಾರ
-
ಉತ್ತಮ ಕನ್ನಡ ಸಿನಿಮಾಗಳಿಗೆ ₹20 ಕೋಟಿ ಸಬ್ಸಿಡಿ ಘೋಷಣೆ
ಆದರೆ ಮೈಸೂರಿನಲ್ಲಿ ನಿರ್ಮಾಣವಾಗಬೇಕಿರುವ ಫಿಲ್ಮ್ ಸಿಟಿ ಯೋಜನೆಗೆ ಈ ಬಜೆಟ್‌ನಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.
📌 ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ
ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯೂ ಭಾರೀ ಅನುದಾನ ಮೀಸಲಿಡಲಾಗಿದೆ.
-
ಗೃಹಲಕ್ಷ್ಮಿ ಯೋಜನೆ – ₹28,608 ಕೋಟಿ
-
ಅನ್ನಭಾಗ್ಯ ಯೋಜನೆ – ₹6,200 ಕೋಟಿ
-
ಗೃಹ ಜ್ಯೋತಿ ಯೋಜನೆ – ₹10,578 ಕೋಟಿ
-
ಶಕ್ತಿ ಯೋಜನೆ – ₹5,300 ಕೋಟಿ
ಆದರೆ ಯುವ ನಿಧಿ ಯೋಜನೆಗೆ ಈ ಬಾರಿ ಯಾವುದೇ ಹೊಸ ಅನುದಾನ ಘೋಷಣೆ ಮಾಡಲಾಗಿಲ್ಲ.

📌 ಬೆಂಗಳೂರಿಗೆ ಬಂಪರ್ ಘೋಷಣೆ
ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.
-
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ₹7,000 ಕೋಟಿ ಅನುದಾನ
-
450 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ₹3,000 ಕೋಟಿ
-
ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ₹1,936 ಕೋಟಿ
-
ಸಿಲ್ಕ್ ಬೋರ್ಡ್ ರಿಂದ ಕೆಆರ್ ಪುರಂವರೆಗೆ ರಿಂಗ್ ರಸ್ತೆ ಅಭಿವೃದ್ಧಿಗೆ ₹450 ಕೋಟಿ
-
ರಾಜಕಾಲುವೆ ಅಭಿವೃದ್ಧಿಗೆ ₹273 ಕೋಟಿ
ಇದೇ ವೇಳೆ ಬೆಂಗಳೂರು ಮೆಟ್ರೋ ವಿಸ್ತರಣೆಗೆ 41 ಕಿ.ಮೀ ಹೊಸ ಮಾರ್ಗ ನಿರ್ಮಿಸಲು ಯೋಜನೆ ಮಾಡಲಾಗಿದೆ.

📌 ಸುರಂಗ ರಸ್ತೆ ಮತ್ತು ಟ್ರಾಫಿಕ್ ಪರಿಹಾರ ಯೋಜನೆ
ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸರ್ಕಾರ ದೊಡ್ಡ ಯೋಜನೆಗಳನ್ನು ಘೋಷಿಸಿದೆ.
-
ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗೆ ಸುರಂಗ ರಸ್ತೆ ನಿರ್ಮಾಣಕ್ಕೆ ₹2,250 ಕೋಟಿ
-
ನೆಲಮಂಗಲ – ತಾವರೆಕೆರೆ – ಬಿಡದಿ ನಡುವೆ ಮಧ್ಯಂತರ ರಿಂಗ್ ರಸ್ತೆ ಯೋಜನೆ
ಇವುಗಳ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.
📌 ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಯೋಜನೆ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ‘ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ’ ಜಾರಿಗೆ ತರಲಾಗುತ್ತಿದೆ.
-
ADB ಸಹಾಯದೊಂದಿಗೆ ₹2,500 ಕೋಟಿ ವೆಚ್ಚ
-
40 ಸರ್ಕಾರಿ ಪದವಿ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.
-
ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಬೆಳೆಸಲು 9 ಉತ್ಕೃಷ್ಟತಾ ಕೇಂದ್ರಗಳು ಸ್ಥಾಪಿಸಲಾಗುತ್ತವೆ.
ಇದರ ಜೊತೆಗೆ
-
2,000 ಬೋಧಕ ಹುದ್ದೆಗಳ ನೇಮಕಾತಿ
-
ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ
ಮಹಿಳಾ ವಿದ್ಯಾರ್ಥಿನಿಯರಿಗೆ ಮೂಲಸೌಕರ್ಯ ಒದಗಿಸಲು ₹31 ಕೋಟಿ ಅನುದಾನ ಘೋಷಿಸಲಾಗಿದೆ.
📌 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೆಚ್ಚಿನ ಒತ್ತು
ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ದೊಡ್ಡ ಯೋಜನೆ ಘೋಷಿಸಿದೆ.
-
ಒಟ್ಟು 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ
-
ಈ ಯೋಜನೆಗೆ ₹3,900 ಕೋಟಿ ವೆಚ್ಚ ಮಾಡಲಾಗುತ್ತದೆ.
ಇದರ ಜೊತೆಗೆ
-
184 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಣ
-
50 ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳಾಗಿ ಪರಿವರ್ತನೆ
📌 ಅರಣ್ಯ ಇಲಾಖೆಯಲ್ಲಿ ಉದ್ಯೋಗ ಅವಕಾಶ
ಅರಣ್ಯ ಇಲಾಖೆಯಲ್ಲಿ 2,000 ಹುದ್ದೆಗಳ ನೇಮಕಾತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ.
ಇದರ ಜೊತೆಗೆ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.
📌 ಸಮುದಾಯಗಳ ಅಭಿವೃದ್ಧಿಗೆ ಹೊಸ ನಿಗಮಗಳು
ಈ ಬಜೆಟ್‌ನಲ್ಲಿ ಕೆಲವು ಸಮುದಾಯಗಳ ಆರ್ಥಿಕಾಭಿವೃದ್ಧಿಗೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
ಇವುಗಳಲ್ಲಿ:
-
ಕುಂಬಾರ
-
ತಿಗಳ
-
ಗಾಣಿಗ
-
ಕೊಡವ
-
ಉಪ್ಪಾರ
-
ಈಡಿಗ
-
ಕಾಡುಗೊಲ್ಲ
ಇದೇ ವೇಳೆ ಸವಿತಾ ಸಮಾಜದವರಿಗೆ ಸೆಲೂನ್ ಆರಂಭಿಸಲು ₹10 ಲಕ್ಷವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.