WhatsApp Join My WhatsApp

New Ration Card Apply : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಪಡೆಯಲು ಹಲವು ತಿಂಗಳುಗಳಿಂದ ಕಾಯುತ್ತಿದ್ದ ಕುಟುಂಬಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಕೆಲವು ವಿಶೇಷ ವರ್ಗದ ಜನರಿಗೆ ಮಾತ್ರ ಈಗ ಹೊಸ ರೇಷನ್ ಕಾರ್ಡ್‌ಗೆ ಅವಕಾಶ ನೀಡಲಾಗಿದೆ.

ನೀವು ಇತ್ತೀಚೆಗೆ ಮದುವೆಯಾಗಿದ್ದೀರಾ?
ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡಿ ಇ-ಶ್ರಮ್ (e-Shram) ಕಾರ್ಡ್ ಹೊಂದಿದ್ದೀರಾ?
ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿದ್ದೀರಾ?

ಹಾಗಾದರೆ ಈ ಮಾಹಿತಿ ನಿಮ್ಮಿಗೇ ಅತ್ಯಂತ ಉಪಯುಕ್ತ. ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ 15 ದಿನಗಳೊಳಗೆ ರೇಷನ್ ಕಾರ್ಡ್ ಸಿಗುವ ಸಾಧ್ಯತೆ ಇದೆ.

📅 ಹೊಸ ರೇಷನ್ ಕಾರ್ಡ್ ಅರ್ಜಿ ಅವಧಿ

  • ಅರ್ಜಿಗೆ ಅವಕಾಶ: 2025 ಅಕ್ಟೋಬರ್ 4 ರಿಂದ 2026 ಮಾರ್ಚ್ 31 ರವರೆಗೆ.

  • ಅರ್ಜಿಯ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ.

👨‍👩‍👧‍👦 ಹೊಸ ರೇಷನ್ ಕಾರ್ಡ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

ರಾಜ್ಯ ಸರ್ಕಾರದ ಆದೇಶದಂತೆ ಕೆಳಗಿನ ವಿಶೇಷ ವರ್ಗದವರು ಮಾತ್ರ ಅರ್ಜಿ ಸಲ್ಲಿಸಬಹುದು:

  •  ಇ-ಶ್ರಮ್ (e-Shram) ಕಾರ್ಡ್ ಹೊಂದಿರುವವರು.
  • ದಿನಗೂಲಿ ಕಾರ್ಮಿಕರು.

  • ಕಟ್ಟಡ ಕಾರ್ಮಿಕರು.

  • ಬೀದಿ ವ್ಯಾಪಾರಿಗಳು.

  • ಅಸಂಘಟಿತ ವಲಯದ ಕಾರ್ಮಿಕರು
    ವಯಸ್ಸು: 16 ರಿಂದ 59 ವರ್ಷ
    ಗಮನಿಸಿ: EPFO, ESI ಅಥವಾ NPS ಸದಸ್ಯರಾಗಿರಬಾರದು.

✔️ ವೈದ್ಯಕೀಯ ತುರ್ತು ಪರಿಸ್ಥಿತಿ ಇರುವ ಕುಟುಂಬಗಳು

ಕುಟುಂಬದಲ್ಲಿ ಗಂಭೀರ ಅನಾರೋಗ್ಯ ಇದ್ದು BPL ಕಾರ್ಡ್ ಅಗತ್ಯವಿದ್ದರೆ, ಆಸ್ಪತ್ರೆಯ ಅಧಿಕೃತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಇಂತಹ ಅರ್ಜಿಗಳಿಗೆ ಆದ್ಯತೆ ನೀಡಲಾಗುತ್ತದೆ.

✔️ ಹೊಸ ವಿವಾಹಿತ ದಂಪತಿಗಳು / ಹೊಸ ಕುಟುಂಬಗಳು

ಇತ್ತೀಚೆಗೆ ಮದುವೆಯಾಗಿ ತಂದೆ-ತಾಯಿಯ ರೇಷನ್ ಕಾರ್ಡ್‌ನಿಂದ ಬೇರ್ಪಟ್ಟು ಹೊಸ ಕುಟುಂಬ ಆರಂಭಿಸಿರುವವರು ಅರ್ಜಿ ಹಾಕಬಹುದು.

✔️ PVTG (ಅತ್ಯಂತ ದುರ್ಬಲ ಬುಡಕಟ್ಟು) ಸಮುದಾಯದವರು

ನಿರ್ದಿಷ್ಟ ಬುಡಕಟ್ಟು ಸಮುದಾಯಗಳಿಗೆ ಸೇರಿದ ಕುಟುಂಬಗಳಿಗೆ ಈ ಸೌಲಭ್ಯ ಅನ್ವಯಿಸುತ್ತದೆ.

📄 ಬೇಕಾಗುವ ಪ್ರಮುಖ ದಾಖಲೆಗಳು | Documents

ದಾಖಲೆಗಳು ಸರಿಯಾಗಿದ್ದರೆ 15–30 ದಿನಗಳಲ್ಲಿ ರೇಷನ್ ಕಾರ್ಡ್ ದೊರೆಯುತ್ತದೆ. ತುರ್ತು ಸಂದರ್ಭಗಳಲ್ಲಿ 7 ದಿನಗಳಲ್ಲೂ ಸಿಗುವ ಸಾಧ್ಯತೆ ಇದೆ.

  • ಇ-ಶ್ರಮ್ ಕಾರ್ಡ್ / ವೈದ್ಯಕೀಯ ತುರ್ತು ಆಸ್ಪತ್ರೆ ದಾಖಲೆ.

  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.

  • ಆಧಾರ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.

  • ವಿಳಾಸ ಪುರಾವೆ (ವಿದ್ಯುತ್ ಬಿಲ್ / ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್).

  • ಆದಾಯ ಮತ್ತು ಜಾತಿ ಪ್ರಮಾಣಪತ್ರ (BPLಗೆ ಕಡ್ಡಾಯ).

  • ಕುಟುಂಬದ ಮುಖ್ಯಸ್ಥರ ಪಾಸ್‌ಪೋರ್ಟ್ ಸೈಸ್ ಫೋಟೋ.

  • 6 ವರ್ಷದೊಳಗಿನ ಮಕ್ಕಳಿದ್ದರೆ ಜನನ ಪ್ರಮಾಣಪತ್ರ.

 

🖥️ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನ

🔹 ಆನ್‌ಲೈನ್ ಮೂಲಕ | Online

  • ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  • “ಹೊಸ ಪಡಿತರ ಚೀಟಿ” ಆಯ್ಕೆ ಮಾಡಿ.

  • ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಅರ್ಜಿ ಸಲ್ಲಿಸಿ.

🔹 ಆಫ್‌ಲೈನ್ ಮೂಲಕ | Offline

ಆನ್‌ಲೈನ್ ಸಾಧ್ಯವಾಗದಿದ್ದರೆ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ:

  • ಗ್ರಾಮ ಒನ್.

  • ಕರ್ನಾಟಕ ಒನ್.

  • ಬೆಂಗಳೂರು ಒನ್.

  • ತಾಲ್ಲೂಕು ತಹಸೀಲ್ದಾರ್ ಕಚೇರಿ.

✅ ಹಳೆಯ ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

2026 ಮಾರ್ಚ್ 31 ರೊಳಗೆ ಈ ತಿದ್ದುಪಡಿಗಳನ್ನು ಮಾಡಿಸಬಹುದು:

  • ಹೊಸ ಸದಸ್ಯರ ಸೇರ್ಪಡೆ.

  • ಹೆಸರು ತಿದ್ದುಪಡಿ.

  • ವಿಳಾಸ ಬದಲಾವಣೆ.

  • ಮರಣ ಹೊಂದಿದ ಸದಸ್ಯರ ಹೆಸರು ತೆಗೆದುಹಾಕುವುದು.

ಹೆಚ್ಚಿನ ಮಾಹಿತಿಗಾಗಿ 

Leave a Comment