ನಮಸ್ಕಾರ ಸ್ನೇಹಿತರೆ,
ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ದೊಡ್ಡ ಗುಡ್ ನ್ಯೂಸ್ ಬರ್ತಿದೆಯಾ? ಎಂಬ ಪ್ರಶ್ನೆ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ (PM Kisan) ಅಡಿಯಲ್ಲಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಈಗ ಕೇಂದ್ರ ಬಜೆಟ್ 2026ರಲ್ಲಿ ಈ ಹಣವನ್ನು ₹6,000ರಿಂದ ₹10,000ಕ್ಕೆ ಹೆಚ್ಚಿಸಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹಾಗಾದ್ರೆ ಇದು ನಿಜವೇ? 22ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
🔹 ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಏನು?
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೆ ತಂದ ಪ್ರಮುಖ ಯೋಜನೆ.
ಬೆಳೆ ಬಿತ್ತನೆ, ರಸಗೊಬ್ಬರ, ಕೀಟನಾಶಕ ಖರೀದಿ ಮತ್ತು ಬೆಳೆ ಕಟಾವು ಸಮಯದಲ್ಲಿ ರೈತರಿಗೆ ಹಣಕಾಸಿನ ನೆರವು ಒದಗಿಸುವುದು ಇದರ ಮುಖ್ಯ ಗುರಿ.
ಈ ಯೋಜನೆಯಡಿ ಅರ್ಹ ರೈತರಿಗೆ:
-
ವರ್ಷಕ್ಕೆ ₹6,000
-
ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000
-
ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ
ಇಲ್ಲಿವರೆಗೆ ರೈತರು 21 ಕಂತುಗಳನ್ನು ಪಡೆದುಕೊಂಡಿದ್ದು, ಒಟ್ಟು ಸುಮಾರು ₹42,000 ಹಣವನ್ನು ಈ ಯೋಜನೆಯ ಮೂಲಕ ಪಡೆದಿದ್ದಾರೆ.
🔹 PM Kisan ಹಣ ₹6,000ರಿಂದ ₹10,000ಕ್ಕೆ ಏರಿಕೆಯಾಗುತ್ತಾ?
ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಸುದ್ದಿ ಮಾಧ್ಯಮಗಳಲ್ಲಿ, ಕೇಂದ್ರ ಬಜೆಟ್ 2026ರಲ್ಲಿ ಪಿಎಂ ಕಿಸಾನ್ ಹಣವನ್ನು ₹10,000ಕ್ಕೆ ಹೆಚ್ಚಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ ಇದುವರೆಗೆ:
-
ಕೇಂದ್ರ ಸರ್ಕಾರದ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ
-
ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಇಲ್ಲ
-
ಸಚಿವಾಲಯದಿಂದ ದೃಢೀಕರಣ ಬಂದಿಲ್ಲ
ಆದ್ರೆ ಕೆಲ ಸಮೀಕ್ಷೆಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹಣ ಏರಿಕೆಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಇದರ ಬಗ್ಗೆ ಸ್ಪಷ್ಟ ಮಾಹಿತಿ ಬಜೆಟ್ ಮಂಡನೆಯ ನಂತರವೇ ಲಭ್ಯವಾಗಲಿದೆ.
ಹಣ ಏರಿಕೆಯಾಗಬಹುದು ಎನ್ನಲು ಕಾರಣಗಳು:
-
ಕೃಷಿ ವೆಚ್ಚ, ರಸಗೊಬ್ಬರ ಮತ್ತು ಡೀಸೆಲ್ ಬೆಲೆ ಏರಿಕೆ
-
ರೈತರ ಮೇಲೆ ಹೆಚ್ಚುತ್ತಿರುವ ಆರ್ಥಿಕ ಒತ್ತಡ
-
2026ರಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ
ಈ ಎಲ್ಲ ಕಾರಣಗಳಿಂದಾಗಿ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಚರ್ಚೆ ನಡೆಯುತ್ತಿದೆ.
🔹 PM Kisan 22ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ?
ಈಗಾಗಲೇ ರೈತರು 21ನೇ ಕಂತಿನ ಹಣವನ್ನು ಪಡೆದಿದ್ದಾರೆ.
22ನೇ ಕಂತಿನ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ.
ಆದರೆ:
-
ಹಿಂದಿನ ಕಂತುಗಳ ಬಿಡುಗಡೆ ವೇಳಾಪಟ್ಟಿಯನ್ನು ಗಮನಿಸಿದರೆ
-
ಕೆಲವು ಮಾಧ್ಯಮ ವರದಿಗಳ ಪ್ರಕಾರ
👉 ಫೆಬ್ರವರಿ 2026ರಲ್ಲಿ ₹2,000 (22ನೇ ಕಂತು) ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
🔹 ಪಿಎಂ ಕಿಸಾನ್ ಹಣ ಪಡೆಯಲು ರೈತರು ಪಾಲಿಸಬೇಕಾದ ನಿಯಮಗಳು
ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ರೈತರು ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
-
PM Kisan e-KYC ಪ್ರಕ್ರಿಯೆ ಪೂರ್ಣಗೊಂಡಿರಬೇಕು
-
ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರಬೇಕು
-
ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು
-
NPCI Mapping ಪೂರ್ಣಗೊಂಡಿರಬೇಕು
-
ಜಮೀನು ದಾಖಲೆಗಳು ಸರಿಯಾಗಿರಬೇಕು
-
ಜಮೀನು ದಾಖಲೆಗೆ FID ಸೃಷ್ಟಿಸಿರಬೇಕು
-
ಜಮೀನು ದಾಖಲೆಗಳಿಗೆ ಆಧಾರ್ ಲಿಂಕ್ ಆಗಿರಬೇಕು
ಈ ನಿಯಮಗಳಲ್ಲಿ ಯಾವುದಾದರೂ ತಪ್ಪಿದ್ದರೆ ಹಣ ಜಮಾ ಆಗುವುದಿಲ್ಲ.
- Official Website : Click here